ಸದನದಲ್ಲಿ ಇಂದು ಮೀನುಗಾರರ ಸಂಕಷ್ಟ, ಅಧಿಕಾರಿ ಜನಪ್ರತಿನಿಧಿಗಳ ಹಸ್ತಕ್ಷೇಪ, ದೈವ ದೇವಸ್ಥಾನಗಳ ಪುನರುತ್ಥಾನ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತು ಶಾಸಕರು ಪ್ರಸ್ತಾಪಿಸಿದರು.
ಕರಾವಳಿ ಭಾಗದಲ್ಲಿ ವಿಪರೀತ ಮಳೆಯಿಂದ ಹಾಗೂ ಕಡಲ ಕೊರೆತದಿಂದಾಗಿ ಸಾರ್ವಜನಿಕರ ಆಸ್ತಿಪಾಸ್ತಿ, ಮನೆಗಳು ಹಾನಿಯಾಗಿದ್ದು ಬಡ ಮೀನುಗಾರರು ಹಾಗೂ ಸಾರ್ವಜನಿಕರು ಸಂಕಷ್ಟಕೊಳಗಾಗಿರುತ್ತಾರೆ. ಕಡಲ ಕೊರೆತ ಭಾದಿತ ಪ್ರದೇಶದಲ್ಲಿ ಶಾಶ್ವತ ಪರಿಹಾರ ಹಾಗೂ ಆಸ್ತಿಪಾಸ್ತಿಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಸ್ತಾಪಿಸಿದರೆ ಅನುದಾನದ ಕೊರತೆ ಇದೆ ಎಂಬ ಉತ್ತರ ನೀಡಿರುತ್ತಾರೆ. ಈ ಬಗ್ಗೆ ಸಂಬಂಧಿಸಿದ ಸಚಿವರು ಕೂಡಲೆ ಗಮನಹರಿಸಿ ಅನುದಾನ ಮಂಜೂರುಗೊಳಿಸುವಂತೆ ತಿಳಿಸಿದರು.
ದೈವಸ್ಥಾನ, ಮೂಲಸ್ಥಾನ, ನಾಗಸ್ಥಾನಗಳ ಬೀಡಾಗಿರುವ ತುಳುನಾಡಿನಲ್ಲಿ ಅನೇಕ ದೇವಸ್ಥಾನಗಳು ಹಾಗೂ ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳುವ ಅವಶ್ಯಕತೆ ಇದ್ದು ಈ ಬಾರಿಯ ಬಜೆಟ್ ನಲ್ಲಿ ಇವುಗಳ ಅಭಿವೃದ್ಧಿಗೆ ಅನುದಾನ ಪ್ರಸ್ತಾಪ ಮಾಡಿಲ್ಲ. ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 6000 ಹಾಗೂ ರಾಜ್ಯ ಸರಕಾರದಿಂದ 4000 ಸಾವಿರ ಸೇರಿದಂತೆ ಒಟ್ಟು 10,000 ಪ್ರೋತ್ಸಾಹ ಧನ ರೈತರ ಖಾತೆಗೆ ಜಮಾ ಆಗುತ್ತಿದ್ದು ಈ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ನೀಡುವ 4000 ಪ್ರೋತ್ಸಾಹ ಧನದ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ ಇದರಿಂದ ಅನ್ನ ನೀಡುವ ರೈತನಿಗೆ ಅನ್ಯಾಯವಾಗುತ್ತಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿಪ್ರಕ್ರಿಯೆಯಲ್ಲಿನ ಅವೈಜ್ಞಾನಿಕತೆ ಹಾಗೂ ಕೊರತೆ ಇರುವ ಅಗತ್ಯ ಶಿಕ್ಷಕರ ಹುದ್ದೆಗಳ ಹುದ್ದೆಗಳ ಮಂಜೂರಾತಿಗೆ ಸಂಬಂಧಿಸಿದ ಇಲಾಖಾ ಸಚಿವರಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯೊಂದಿಗೆ ಗಮನಸೆಳೆದಾಗ ಸಂಬಂಧಿಸಿದ ಇಲಾಖೆ ಸಚಿವರು ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ.