18 ಜೂನ್ 2023‌ ರಂದು ಕ್ಷೇತ್ರದ ವಿವಿಧೆಡೆಗಳಲ್ಲಿ ನಡೆದ ಕಾರ್ಯಕ್ರಮಗಳು

ಎರ್ಮಾಳು ಬಡಾ ಮೊಗವೀರ ಸಭಾ ವಾರ್ಷಿಕ ಮಹಾಸಭೆ – ಶಾಸಕರಿಗೆ ಅಭಿನಂದನಾ ಸಮಾರಂಭ

ಎರ್ಮಾಳು ಬಡಾ ಮೊಗವೀರ ಸಭಾ ಇದರ ವಾರ್ಷಿಕ ಮಹಾಸಭೆ ದಿನಾಂಕ 18-06-2023 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ಬಡಾ ಇಲ್ಲಿ ನಡೆಯಿತು.

ವಾರ್ಷಿಕ ಮಹಾ ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಅಭಿನಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎರ್ಮಾಳು ಬಡಾ ಮೊಗವೀರ ಸಭಾ ಅಧ್ಯಕ್ಷರಾದ ಜೀನ್ ರಾಜ್ ಎರ್ಮಾಳು, ಎರ್ಮಾಳು ಬಡಾ ಮೊಗವೀರ ಸಭಾ ಮಹಿಳಾ ಘಟಕದ ಅಧ್ಯಕ್ಷರಾದ ಆಶಾ ಮನೋಜ್, ಎರ್ಮಾಳು ಬಡಾ ಮೊಗವೀರ ಸಭಾ ಕಾರ್ಯದರ್ಶಿಗಳಾದ ಲಕ್ಷ್ಮಣ ತಿಂಗಳಾಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ರೂ. 10 ಲಕ್ಷ ವೆಚ್ಚದಲ್ಲಿ ಪಡುಬಿದ್ರಿ ನಡಿಪಟ್ನ ಕುದುರಿನ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಬಿದ್ರಿ ನಡಿಪಟ್ನ ಕುದುರಿನ ರಸ್ತೆ ಕಾಂಕ್ರೀಟಿಕರಣಕ್ಕೆ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ 10 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ದಿನಾಂಕ 18-06-2023 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ ಆಚಾರ್ಯ, ವಿದ್ಯಾ ಶ್ರೀ, ವಿನಾಯಕ ಪುತ್ರನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತಾ ಗುರುರಾಜ್, ಹಿರಿಯರಾದ ಪಿ.ಕೆ ಸದಾನಂದ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾ (ರಿ.) ವತಿಯಿಂದ ಶಾಸಕರಿಗೆ ಅಭಿನಂದನೆ

ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾ (ರಿ.) ವತಿಯಿಂದ ಇಂದು ದಿನಾಂಕ 18-06-2023 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾ (ರಿ.) ಅಧ್ಯಕ್ಷರಾದ ಗಂಗಾಧರ ಕರ್ಕೇರ, ಉಪಾಧ್ಯಕ್ಷರಾದ ಹರೀಶ್ ಕೆ ಪುತ್ರನ್, ಕಾರ್ಯದರ್ಶಿಗಳಾದ ಉಮಾನ್, ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಿಕಾ, ಕಾಡಿಪಟ್ನ ನಡಿಪಟ್ನ ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷರಾದ ಸುಕುಮಾರ್ ಶ್ರೀಯಾನ್, ನಡಿಪಟ್ನ ಗ್ರಾಮ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀಧರ್ ಮೆಂಡನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಹಾಗೂ ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾ (ರಿ.) ಪದಾಧಿಕಾರಿಗಳು ಉಪಸ್ಥಿತರಿದ್ದರು.


ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಶಾಸಕರಿಗೆ ಅಭಿನಂದನೆ

ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ದಿನಾಂಕ 18-06-2023 ರಂದು ಅಭಿನಂದನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಬಿಜೆಪಿ ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್, ಕೊರಂಗ್ರಪಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಸೇರಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಸೌಮ್ಯ ನಾಯಕ್, ಶಾಂತಾ ನಾಯ್ಕ್, ಶ್ರೀಮತಿ ಶೆಟ್ಟಿ, ಪ್ರಶಾಂತ್ ಆಚಾರ್ಯ, ಮಮತಾ ಶೆಟ್ಟಿಗಾರ್, ಅವಿನಾಶ್ ಶೆಟ್ಟಿಗಾರ್, ಶಂಕರ್ ಪಾಲನ್, ಕೊರಂಗ್ರಪಾಡಿ ಶಕ್ತಿಕೇಂದ್ರದ ಆಶಿಶ್ ಶೆಟ್ಟಿ, ಅಲೆವೂರು ಶಕ್ತಿಕೇಂದ್ರದ ಶೇಖರ್ ಆಚಾರ್ಯ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬೇಬಿ ರಾಜೇಶ್, ಮಾಜಿ ಅಧ್ಯಕ್ಷರಾದ ಶಶಿಕಲಾ ಶೆಟ್ಟಿ, ಪ್ರಮುಖರಾದ ಹೇಮಂತ್ ಶೆಟ್ಟಿ, ಭಾಸ್ಕರ್ ಸೇರಿಗಾರ್, ಅಶೋಕ್ ಶೆಟ್ಟಿಗಾರ್, ಪುರುಷೋತ್ತಮ್ ನಾಯಕ್, ಗಣೇಶ್ ಶೆಟ್ಟಿ, ಸುರೇಶ್ ಬಂಗೇರ ಉಪಸ್ಥಿತರಿದ್ದರು.


ಕೋಟ್ಯಾನ್ ಕಾರ್ ಮೂಲಸ್ಥಾನ (ರಿ) ಕಾಪು ವತಿಯಿಂದ ನೂತನ ಶಾಸಕರಿಗೆ ಅಭಿನಂದನೆ

ಕೋಟ್ಯಾನ್ ಕಾರ್ ಮೂಲಸ್ಥಾನ (ರಿ) ಕಾಪು ವತಿಯಿಂದ ದಿನಾಂಕ 18-06-2023 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಕೋಟ್ಯಾನ್ ಕಾರ್ ಮೂಲಸ್ಥಾನ (ರಿ) ಕಾಪು ಅಧ್ಯಕ್ಷರಾದ ಸುಧರ್ಮ ಕೋಟ್ಯಾನ್, ಗೌರವಾಧ್ಯಕ್ಷರಾದ ಸುಂದರ ಸಿ ಕೋಟ್ಯಾನ್, ಕಾಪು ಪುರಸಭಾ ಸದಸ್ಯರಾದ ನಿತಿನ್ ಕೋಟ್ಯಾನ್, ಕೋಟ್ಯಾನ್ ಕಾರ್ ಮೂಲಸ್ಥಾನ (ರಿ) ಕಾಪು ಉಪಾಧ್ಯಕ್ಷರಾದ ಶೇಖರ್ ಎನ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ್ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷರಾದ ಕಲಾವತಿ ಪುತ್ರನ್ ಉಪಸ್ಥಿತರಿದ್ದರು. ಜನಾರ್ದನ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.


ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 7088 ನೇ ಸ್ಥಾನ ಪಡೆದ ಪ್ರಖ್ಯಾತ್ ಪಿ ನಾಯಕ್ ಮನೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಅಭಿನಂದನೆ

ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಪ್ರಕಾಶ್ ನಾಯಕ್ ಹಾಗೂ ಪ್ರಸೂನ ಅವರ ಮಗನಾದ ಪ್ರಖ್ಯಾತ್ ಪಿ ನಾಯಕ್ ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 7088 ನೇ ಸ್ಥಾನ ಪಡೆದಿದ್ದು,  ದಿನಾಂಕ 18-06-2023 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಖ್ಯಾತ್ ಪಿ ನಾಯಕ್ ಅವರ ಮನೆಗೆ ಭೇಟಿ ನೀಡಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಸಾಲಿಯಾನ್, ಶಕ್ತಿ ಕೇಂದ್ರ ಅಧ್ಯಕ್ಷರಾದ ದಯಾನಂದ ಪೂಜಾರಿ, ವಿನಯ್ ಪೂಜಾರಿ, ಸ್ಥಳೀಯ ನಾಯಕರಾದ ಶೇಖರ್ ಶೆಟ್ಟಿ, ಕಾರ್ಯಕರ್ತರಾದ ಚರಣ್ ಪೂಜಾರಿ, ನಿತ್ಯಾನಂದ ಪೂಜಾರಿ, ವಿಘ್ನೇಶ್, ಅಶೋಕ್ ಪೂಜಾರಿ ಹಾಗೂ ಪ್ರಖ್ಯಾತ್ ಪಿ ನಾಯಕ್ ಅವರ ತಂದೆ ಪ್ರಕಾಶ್ ನಾಯಕ್, ತಾಯಿ ಪ್ರಸೂನ, ಸಹೋದರ ಪ್ರತೀಕ್, ಸಹೋದರಿ ಯಶಸ್ವಿನಿ ಉಪಸ್ಥಿತರಿದ್ದರು.


Media Reports 18-06-2023