ಪಾದಯಾತ್ರೆ ಹಾಗೂ ಬಹಿರಂಗ ಪ್ರಚಾರ ಸಮಾರೋಪ ಕಾರ್ಯಕ್ರಮ – ಮಹಾರಾಷ್ಟ್ರ ಸಿಎಂ ಶ್ರೀ ಏಕನಾಥ್‌ ಶಿಂಧೆ ಭಾಗಿ

ಭಾರತೀಯ ಜನತಾ ಪಾರ್ಟಿ ಕಾಪು ವಿಧಾನ ಸಭಾ ಕ್ಷೇತ್ರ ಮಹಾರಾಷ್ಟ್ರ ರಾಜ್ಯದ ಸನ್ಮಾನ ಮುಖ್ಯಮಂತ್ರಿಗಳಾದ ಶ್ರೀ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಹಾಗೂ ಬಹಿರಂಗ ಪ್ರಚಾರ ಸಮಾರೋಪ ಕಾರ್ಯಕ್ರಮ ಇಂದು ಕಾಪು ಪುರಸಭೆ ವ್ಯಾಪ್ತಿಯ ಕಾಪು ಪೇಟೆಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಕೋಟ ಶ್ರೀನಿವಾಸ್ ಪೂಜಾರಿಯವರು ಬಹಿರಂಗ ಸಮಾರೋಪ ಕಾರ್ಯಕ್ರಮದಲ್ಲಿ ಸೇರಿರುವ ಜನ ಸಂಖ್ಯೆಯು ಗುರ್ಮೆ ಸುರೇಶ್ ಶೆಟ್ಟಿಯವರ ಮೇಲಿರುವ ಅಭಿಮಾನ ಹಾಗೂ ಪ್ರೀತಿಯನ್ನು ತೋರಿಸುತ್ತದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ನಮ್ಮ ದೇಶವು ಅಭಿವೃದ್ಧಿ ರಾಷ್ಟ್ರವಾಗಿದೆ. ಅವರು ಇಂದು ವಿಶ್ವ ನಾಯಕನಾಗಿ ಭಾರತೀಯರೆಲ್ಲರೂ ಹೆಮ್ಮೆ ಪಡುವಂತ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರ ಬಳಿ ಕೇಳಿಕೊಂಡರು.

ಮಹಾರಾಷ್ಟ ಮುಖ್ಯಮಂತ್ರಿ ಶ್ರೀ ಏಕನಾಥ ಶಿಂಧೆಯವರು ಕಾಪು ಕ್ಷೇತ್ರಕ್ಕೆ ಆಗಮಿಸಿರುವುದು ನಮ್ಮ ಸೌಭಾಗ್ಯ. ಕಾಪು ಕ್ಷೇತ್ರ ಅಭಿವೃದ್ಧಿ ಕ್ಷೇತ್ರವಾಗಿ ರೂಪುಗೊಳ್ಳುತ್ತಿದೆ. ನಮ್ಮಲ್ಲಿ ಯಾವುದೇ ಜಾತಿರಾಜಕಾರಣ ಬೇಡ, ಇದು ಧರ್ಮ ಅಧರ್ಮದ ಚುನಾವಣೆ. ರಾಜಕೀಯದಲ್ಲಿ ಯಾವುದೇ ಹಣ ಮಾಡುವ ಅಗತ್ಯವಿಲ್ಲ ಹಗಲಿರುಳು ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀವು ನನಗೆ ಮಾಡಿ ಕೊಡಿ. ನಿಮ್ಮ ಸೇವೆ ಮಾಡಿಕೊಂಡು ಕಾಪು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತೇನೆ ಎಂಬ ಭರವಸೆಯನ್ನು ನೀಡಿದೆ.

ನಂತರ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ ಶಿಂಧೆಯವರು ಮೊದಲಿಗೆ ಎಲ್ಲರಿಗೂ ಕನ್ನಡದಲ್ಲಿ ನಮಸ್ಕಾರ ತಿಳಿಸಿ, ಸೇರಿರುವ ಪಕ್ಷದ ಕಾರ್ಯಕರ್ತರಿಗೆ ವಂದನೆಗಳನ್ನು ತಿಳಿಸಿದರು.  ನಂತರ ಡಬಲ್ ಇಂಜಿನ್ ಸರ್ಕಾರ ಬರಬೇಕು ಗುರ್ಮೆ ಸುರೇಶ್ ಶೆಟ್ಟಿಯವರು ಗೆಲ್ಲಬೇಕು, ಈಗಾಗಲೇ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ದೇಶದ ಹೆಸರನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ನಾವು ಹೆಮ್ಮೆ ಪಡೆಯುವಂತ ಕೆಲಸಗಳನ್ನು ಮಾಡಿದ್ದಾರೆ, ದೇಶದ ಜನರೆ ಬದಲಾವಣೆ ತಂದಿದ್ದಾರೆ. ಇಡೀ ದೇಶದಾದ್ಯಂತ ಮೋದಿಜಿ ಅವರಿಗೆ ಪರಿವಾರ ಇದೆ, ಅವರಿಂದ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಅಗಲಿದೆ, ಪ್ರತಿ ಮನೆಮನೆಗೂ ನೀರಿನ ವ್ಯವಸ್ಥೆ, ಹಲವಾರು ವಿಮಾನ ನಿಲ್ದಾಣಗಳ ನಿರ್ಮಾಣ ಈಗೆ ಹಲವು ಯೋಜನೆಗಳಿವೆ ಎಂದು ತಿಳಿಸಿದರು. ನಂತರ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಿಂಧೆ ಯವರು ನಮ್ಮಲ್ಲಿ ಜಾತಿ ಭೇದಕ್ಕೆ ಅವಕಾಶವಿಲ್ಲ, ಅವರು ಮೊದಲು ಅಧ್ಯತೆ ನೀಡುವುದೇ ಭ್ರಷ್ಟಚಾರಕ್ಕೆ, ಅವರ ಪ್ರಣಾಳಿಕೆ ಗಳು ಕೆಲವ ಪ್ರಣಾಳಿಕೆ ಪಟ್ಟಿಯಲ್ಲೇ ಉಳಿಯುತ್ತದ್ದೆ ಎಂದು ಆಕ್ರೋಶ ವ್ಯಕಪಡಿಸಿದರ. ನಂತರ ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬರಲಿಲ್ಲ ನಿಮ್ಮಂತೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇನೆ, ದಯವಿಟ್ಟು ಎಲ್ಲರೂ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಮತನೀಡಿ ಅವರನ್ನು ಗೆಲ್ಲಿಸಬೇಕಾಗಿ ಕೇಳಿಕೊಂಡರು.

ನಂತರ ಮಾತನಾಡಿದ ಮುಂಬೈ ಉತ್ತರದ ಸಂಸದ ಗೋಪಾಲ್ ಶೆಟ್ಟಿಯವರು ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಭಿವೃದ್ಧಿಗೆ ಪೂರಕವಾಗಿ ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಸರಕಾರ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ. ಡಬಲ್‌ ಎಂಜಿನ್‌ ಸರಕಾರದಿಂದ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯವಿದ್ದು ಹಾಗಾಗಿ ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು ಲಾಲಾಜಿ ಮೆಂಡನ್ ರವರು, ಕಾಪು ಕ್ಷೇತ್ರ ಬಿಜೆಪಿ ಉಸ್ತುವಾರಿ, ದೆಹಲಿ ಶಾಸಕರು ವಿಜೇಂದ್ರ ಗುಪ್ತ, ಮಹಾರಾಷ್ಟ್ರ ಸಂಸದರು ರಾಹುಲ್ ಶಿವಾಳೆ, ಉದ್ಯೋಗ ಮಂತ್ರಿ ಉದಯ್ ಸವಂತ್, ಜಿಲ್ಲಾ ಬಿಜೆಪಿ ಅಧ್ಯಕ್ಷರು ಕೊಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷರು ಶ್ರೀಕಾಂತ್ ನಾಯಕ್, ಥಾನೆ ಮೇಯರ್ ಮೀನಾಕ್ಷಿ ಸುವರ್ಣ, ನಿಕಟ ಪೂರ್ವ ಅಧ್ಯಕ್ಷರು ಕರಾವಳಿ ಪ್ರಾಧಿಕಾರ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ,ರಾಜ್ಯ ಬಿಜೆಪಿ ಉಪಾಧ್ಯಕ್ಷರು ನಯನ ಗಣೇಶ್, ಜಿಲ್ಲಾ ಉಪಾಧ್ಯಕ್ಷರು ಶ್ರೀಶ ನಾಯಕ್, ಕಾಪು ಕ್ಷೇತ್ರ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ಬಂಟ್ವಾಳ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ವೀಣಾ ಶೆಟ್ಟಿ, ಹಾಗೂ ಪಕ್ಷದ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.