ಶಿರ್ವ ಪೇಟೆಯಲ್ಲಿ ಪಾದಯಾತ್ರೆ ಹಾಗೂ ಬಹಿರಂಗ ಸಭೆ – ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಭಾಗಿ

ಕಾಪು ವಿಧಾನಸಭಾ ಕ್ಷೇತ್ರದ ಶಿರ್ವ ಪೇಟೆಯಲ್ಲಿ ಪಾದಯಾತ್ರೆ ಹಾಗೂ ಬಹಿರಂಗ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಮತ್ತು ಫೈರ್ ಬ್ರಾಂಡ್ ನಾಯಕ, ಹಿಮಂತ್ ಬಿಸ್ವಾ ಶರ್ಮ ರವರು ಭೇಟಿ ನೀಡಿದರು. ಕಾಪು ಕ್ಷೇತ್ರದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ ಲಾಲಾಜಿ ಮೆಂಡನ್ ಅವರು, ಕಾಪು ಕ್ಷೇತ್ರ ಸಮರ್ಥ ನಾಯಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ, ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಶೆಟ್ಟಿಯವರ ಬೆಂಬಲಕ್ಕೆ ನಾವು ಇಂದು ಎಲ್ಲರು ಸೇರಿದ್ದೇವೆ, ಶಿರ್ವದ ಎಲ್ಲಾ ಬಿಜೆಪಿ ಮತದಾರರು ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಬೆಂಬಲ ನೀಡಬೇಕು. ಕಾಪು ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಅಪಾರ, ಮುಂದಿನ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ಚೆನ್ನಾಗಿ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್ ರವರು, ಸೇರಿರುವ ಜನಸಾಗರವನ್ನು ನೋಡಿದಾಗ ಗುರ್ಮೆ ಸುರೇಶ್ ಶೆಟ್ಟಿಯವರೇ ಶಾಸಕರು ಆಗುತ್ತಾರೆ ಎಂಬ ಭರವಸೆ ಕಾಣುತ್ತಿದೆ. ಧಾನ ಧರ್ಮದಲ್ಲಿ ಈಗಾಗಲೇ ಕೀರ್ತಿ ಪಡೆದಿರುವ ಗುರ್ಮೆ ಸುರೇಶ್ ಶೆಟ್ಟಿಯವರು, ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶಿರ್ವ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಪುಣ್ಯ. ಕಾಪು ಕ್ಷೇತ್ರ ಹೂವಿನ ತೋಟದಂತಿರಬೇಕು. ಇಷ್ಟು ಜನ ಸೇರಿದ್ದನ್ನು ನೋಡಿದಾಗಲೇ ನನ್ನಲ್ಲಿ ಇನ್ನಷ್ಟು ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ. ಕಾಂಗ್ರೆಸ್‌ನವರು ಎಷ್ಟು ತುಳಿದರೂ ನಾವು ಬೆಳೆಯುತ್ತೇವೆ. ನಿಮ್ಮ ಪ್ರಣಾಳಿಕೆಯ ಕನಸನ್ನು ಕನಸಾಗಿಯೇ ಇಡುತ್ತೇವೆ ಎಂದು ಮತದಾರರನ್ನುದ್ದೇಶಿಸಿ ಮಾತನಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಅವರು, ಮೋದಿಜಿಯವರು ದೇಶಕ್ಕೆ ನೀಡಿರುವ ಕೊಡುಗೆಗಳ ಶ್ಲಾಘನೆ ವ್ಯಕ್ತಪಡಿಸಿ, ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದುಗೊಳಿಸಿದ ವಿಷಯದಲ್ಲಿ ಮೋದಿ ಸರ್ಕಾರ ಮಾಡಿದ ಸಾಹಸವನ್ನು ಹೊಗಳಿದರು.

ಇನ್ನಷ್ಟು ಯೋಜನೆಗಳು ಆಲೋಚನೆಯಲ್ಲಿವೆ ಕಾರ್ಯರೂಪಕ್ಕೆ ಶ್ರೀಘ್ರವಾಗಿ ತರಲಿದ್ದೇವೆ ಎಂದು ನುಡಿದರು. ನಂತರ ಶಿರ್ವ ಕ್ಷೇತ್ರದಲ್ಲಿ ಸೇರಿರುವ ಜನ ಸಾಗರವನ್ನು ನೋಡಿ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕೊಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷರು ಶ್ರೀಕಾಂತ್ ನಾಯಕ್, ದೆಹಲಿ ಶಾಸಕರು ಹಾಗೂ ಕಾಪು ಕ್ಷೇತ್ರ ಬಿಜೆಪಿ ಉಸ್ತುವಾರಿ ವಿಜೇಂದ್ರ ಗುಪ್ತ, ನಿಕಟ ಪೂರ್ವ ಅಧ್ಯಕ್ಷರು ಕರಾವಳಿ ಪ್ರಾಧಿಕಾರ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನಾ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.