7 ಮೇ 2023‌ ರಂದು ಕ್ಷೇತ್ರದ ವಿವಿಧೆಡೆಗಳಲ್ಲಿ ನಡೆದ ಸಭೆಗಳು

ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು, ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕ ಕ್ಷೇತ್ರ ಕ್ಕೆ ಹಲವಾರು ಅನುದಾನಗಳನ್ನು ನೀಡಿದೆ, ಇನ್ನಷ್ಟು ಯೋಜನೆಗಳನ್ನು ಬಿಜೆಪಿ ಸರ್ಕಾರವು ನಡೆಸಿ ಕೊಡಲಿದೆ ಕಾಪು ಕ್ಷೇತ್ರ ದ ಅಭಿವೃದ್ದಿಗೆ ಗುರ್ಮೆ ಸುರೇಶ್ ಶೆಟ್ಟಿ ಯವರ ಅಗತ್ಯ ವಿದೆ ನಿಮ್ಮ ಸಂಪೂರ್ಣ ಬೆಂಬಲ ಅವರಿಗೆ ನೀಡಬೇಕಾಗಿ ಕೇಳಿಕೊಂಡರು.

ನಂತರ ಮಾತನಾಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ ಲಾಲಾಜಿ ಮೆಂಡನ್ ಅವರು ಶೈಕ್ಷಣಿಕ, ಸಾಮಾಜಿಕ ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಯವರ ಜೊತೆಗೆ ಇದ್ದು ಬಿಜೆಪಿ ಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೆನೆ, ಗುರ್ಮೆ ಸುರೇಶ್ ಶೆಟ್ಟಿ ಯವರಿಂದ ಕಾಪು ಕ್ಷೇತ್ರವು ಅಭಿವೃದ್ಧಿ ಕ್ಷೇತ್ರವಾಗಲಿದೆ ಎಂದು ತಿಳಿಸಿ ನಿಮ್ಮ ಬೆಂಬಲ ನಮಗೆ ಅಗತ್ಯ ಎಂದು ತಿಳಿಸಿದರು.

ನಂತರ ಮಾತನಾಡಿದ ಉಡುಪಿ ವಿಧಾನ ಸಭಾ ಕ್ಷೇತ್ರ ದ ಬಿಜೆಪಿ ಶಾಸಕರು ರಘುಪತಿ ಭಟ್ ಅವರು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ತಿಳಿಸಿದರು, ಗೋ ಹತ್ಯೆ ನಿಷೇದ ಕಾಯ್ದೆ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಮರು ಆಚರಣೆ ನಡೆಸುವ ಬಗ್ಗೆ ಹಾಗೂ, ಭಜರಂಗದಳ ನಿಷೇದ ಮಾಡುವದರ,ಈ ರೀತಿಯ ಹಗಲು ಕನಸುಗಳನ್ನು ಕಾಣುವುದು ಕಾಂಗ್ರೆಸ್ ಪಕ್ಷದವರು ಬಿಡಬೇಕು, ಧರ್ಮ ರಕ್ಷಣೆ ಗೋಸ್ಕರ ಇರುವ ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು.

ಶಾಸಕ ಲಾಲಾಜಿ ಮೆಂಡನ್ ಅವರ ಅಭಿವೃದ್ಧಿ ಕೆಲಸಗಳು ಆದರ್ಶವು ಕಾಪು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಶ್ರೀ ರಕ್ಷೆ ಯಾಗಲಿದೆ, ಬಿಜೆಪಿ ಪಕ್ಷದ ಸಿದ್ಧಾಂತ, ರಾಷ್ಟ್ರೀಯವಾದ ಹಾಗೂ ರಾಷ್ಟ್ರಪರ ಚಿಂತನೆಗಳು ಹಾಗೂ ಹಿರಿಯರೆಲ್ಲರೂ ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡಿದೆ.

ಈ ಸಂದರ್ಭದಲ್ಲಿ ಉದ್ಯಾವರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ರವಿ ಕೋಟ್ಯಾನ್, RSS ಪ್ರಚಾರಕರು ಪ್ರಸಾದ್ ಕುತ್ಯಾರ್, ಉದ್ಯಾವರ ಪಂಚಾಯತ್ ಅಧ್ಯಕ್ಷರು ರಾಧಾಕೃಷ್ಣ ಶ್ರೀಯನ್,ರಾಜ್ಯ ಬಿಜೆಪಿ ಉಪಾಧ್ಯಕ್ಷರು ನಯನ ಗಣೇಶ್, ಸಂಪಿಗೆ ನಗರ ಬೂತ್ ಅಧ್ಯಕ್ಷರು ಶ್ರೀಧರ್ ಪಂಚಾಯತ್ ಸದಸ್ಯರು ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್, ಬಿಜೆಪಿ ಮುಖಂಡರು ಸುರೇಂದ್ರ ಪಣಿಯೂರು, ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ, ಸಂತೋಷ್ ಬೊಲ್ಜೆ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.


ಕಳತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಚಲಕಾಡು ಪ್ರದೇಶಕ್ಕೆ ಭೇಟಿ ನೀಡಿ ಮತಯಾಚಿಸಲಾಯಿತು.


ಪಲಿಮಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ 183 ಭೂತ್ ನಂದಿಕೂರು, ಪ್ರದೇಶದ, ಪಡುಕೆರೆ ನಂದಿಕೂರು ಕೊರ್ದಬ್ಬು ದೈವಸ್ಥಾನ ಹಾಗೂ ಅಡ್ವೆ ಅರಂತಡೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದು ಮತಯಾಚಿಸಲಾಯಿತು.

ಶ್ರೀ ಲಾಲಾಜಿ ಮೆಂಡನ್ ಅವರ ಯೋಜನೆಗಳು ಮನೆ ಮನೆ ತಲುಪಿದೆ. ಕಾಪು ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ಆಗಲಿಕ್ಕಿದೆ, ಇದು ಧರ್ಮ ಅಧರ್ಮದ ಚುನಾವಣೆ, ನಮ್ಮ ಧರ್ಮ ಗೆಲ್ಲಬೇಕು, ಅದಕ್ಕೆ ನಿಮ್ಮ ಬೆಂಬಲ ಅಗತ್ಯ ದಯವಿಟ್ಟು ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಬೇಕೆಂದು ಕೇಳಿಕೊಂಡೆ.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು ಸೌಮ್ಯಲತಾ ಶೆಟ್ಟಿ, ಲಕ್ಷಣ ಶೆಟ್ಟಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಶಶಿಕಾಂತ್ ಪಡುಬಿದ್ರೆ, ಹಿಂದೂ ಮುಖಂಡರಾದ ಸತೀಶ್ ಶೆಟ್ಟಿ ಬೇಜ್ಜಬೆಟ್ಟು, ಹಿಂದೂ ಜಾಗರಣ ವೇದಿಕೆ ಮುಖಂಡರು ಪ್ರತೀಕ್ ಕೋಟ್ಯಾನ್ ನಂದಿಕೂರು, ಪಲಿಮಾರ್ ಪಂಚಾಯತ್ ಸದಸ್ಯರು ಪ್ರವೀಣ್ ಕುಮಾರ್ ಅಡ್ವೆ,ಹಿಂದೂ ಮುಖಂಡ ರಾದ ಪ್ರವೀಣ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಗಣೇಶ್ ಸಾಲ್ಯಾನ್ ಹಾಗೂ ಬಿಜೆಪಿ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಕಸು ಪ್ರದೇಶದಲ್ಲಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಪಲಿಮಾರ್ ಪಂಚಾಯತ್ ಅಧ್ಯಕ್ಷರು ಗಾಯತ್ರಿ ಪ್ರಭು,ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಲಿಮಾರ್, ಪ್ರವೀಣ್ ಕುಮಾರ್ ಅಡ್ವೆ ವಾರ್ಡ್ ಅಧ್ಯಕ್ಷರು ದಿನೇಶ್ ದರ್ಕಸು, ಪಲಿಮಾರು ಪಂಚಾಯತ್ ಸದಸ್ಯೆ ಸುಜಾತ ಪಲಿಮಾರು, ಮಾಜಿ ಪಲಿಮಾರು ಪಂಚಾಯತ್ ಅಧ್ಯಕ್ಷರು ಮಧುಕರ್ ಸುವರ್ಣ, ರಾಯೇಶ್ ಪೈ ಪಂಚಾಯತ್ ಸದಸ್ಯರು, ಬಿಜೆಪಿ ಕಾಪು ಕ್ಷೇತ್ರ ಮಂಡಲ ಸದಸ್ಯ,ಪ್ರಕಾಶ್ ಆಚಾರ್ಯ ವಾರ್ಡ್ ಅಧ್ಯಕ್ಷರು, ಸುಧಾಮ ಶೆಟ್ಟಿ ವಾರ್ಡ್ ಅಧ್ಯಕ್ಷರು, ರಾಘವೇಂದ್ರ ಸುವರ್ಣ, ಹರೀಶ್ ಶೆಟ್ಟಿ ನಂದಿ ಮನೆ ಮತ್ತು ಪ್ರಮುಖರು ಉಪಸ್ಥಿತರಿದ್ದರು.


ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸಾರು ಪ್ರದೇಶದಲ್ಲಿ ಮತಯಾಚಿಸಲಾಯಿತು.

ರಾಜಕೀಯದಲ್ಲಿ ಜಾತಿ ಬರಬಾರದು, ಜಾತಿ ರಾಜಕೀಯದಲ್ಲಿ ಯಾವತ್ತು ನಮಗೆ ಒಳಿತಿಲ್ಲ, ಮೊದಲು ನಮ್ಮ ಧರ್ಮ ಗೆಲ್ಲಬೇಕು. ಧರ್ಮದ ಸಂಕಲ್ಪ ಗೆಲ್ಲಬೇಕು. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಬೇಕು. ಇದಕ್ಕೆ ನಿಮ್ಮ ಬೆಂಬಲ ಅಗತ್ಯ ಎಲ್ಲರೂ ಮೇ 10ರಂದು ಮತದಾನ ಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಕೇಳಿಕೊಂಡೆ.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಗೀತಾ ಸುವರ್ಣ, ಪಂಚಾಯತ್ ಸದಸ್ಯರು ಶ್ರೀನಿವಾಸ್ ಕಿನ್ನಿ, ಸುಭಾಸ್ ಬಲ್ಲಾಲ್, ಕವಿತಾ, ಸುಮತಿ ಶೇರಿಗಾರ್, ಹಾಗೂ ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.