23 ಜುಲೈ 2023‌ ರಂದು ಕ್ಷೇತ್ರದ ವಿವಿಧೆಡೆಗಳಲ್ಲಿ ನಡೆದ ಕಾರ್ಯಕ್ರಮಗಳು

ಭಾರಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ – ಇಲಾಖಾಧಿಕಾರಿಗಳೊಂದಿಗೆ ಶಾಸಕರ ಭೇಟಿ ಪರಿಶೀಲನೆ

ಭಾರಿ ಗಾಳಿ ಮಳೆಗೆ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ನಿವಾಸಿ ಇಂದಿರಾ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ ಉಂಟಾಗಿದ್ದು, ದಿನಾಂಕ 23-07-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ನಯನ, ಜ್ಯೋತಿ, ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್, ಶಕ್ತಿ ಕೇಂದ್ರದ ಕೃಷ್ಣ ಕಂಚಿನಡ್ಕ, ಬೂತ್ ಅಧ್ಯಕ್ಷರಾದ ಶಿವಾನಂದ, ಪ್ರಭಾಕರ, ಗ್ರಾಮ ಲೆಕ್ಕಾಧಿಕಾರಿಗಳಾದ ಮತಾಯಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಕೆಸರ್ಡ್ ಒಂಜಿ ದಿನ ಕೊಂಡಾಡಿಡ್

ಶ್ರೀ ರಾಮ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇದರ ವತಿಯಿಂದ ದಿನಾಂಕ 23-07-2023 ರಂದು ಕೊಂಡಾಡಿ ಮಂಜೊಟ್ಟಿ ಬಳಿ ನಡೆಯುತ್ತಿರುವ 5 ನೇ ವರ್ಷದ “ಕೆಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.


ಬಲೆ ಕೆಸರ್ಡ್ ಗೊಬ್ಬುಗ

ಶ್ರೀ ಮಹಾಲಿಂಗೇಶ್ವರ ಕೊಂಡಾಡಿ ಸ್ಥಳೀಯರ ಹಾಗೂ ಕೃಷಿಕರ ಆಶ್ರಯದಲ್ಲಿ ಮತ್ತು ಲಯನ್ಸ್ ಕ್ಲಬ್ ಹಿರಿಯಡಕ ಸಹಕಾರದೊಂದಿಗೆ ದಿನಾಂಕ 23-07-2023 ರಂದು “ಬಲೆ ಕೆಸರ್ಡ್ ಗೊಬ್ಬುಗ” ಕಾರ್ಯಕ್ರಮ ನಡೆಯಿತು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಕಾರ್ಯಕ್ರಮನ್ನು ಉದ್ಘಾಟಿಸಿ ಶುಭಹಾರೈಸಿದರು.


ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ

ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಪೆರ್ಡೂರು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಕ್ಕೆಹಳ್ಳಿ, ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ, ಪೆರ್ಡೂರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಶೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜ (ರಿ.) ಪೆರ್ಡೂರು, ಪದ್ಮಕಮಲ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ (ರಿ.) ಪೆರ್ಡೂರು, ಜಿಲ್ಲಾ ರಕ್ತನಿಧಿ ಕೇಂದ್ರ, ಉಡುಪಿ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ – ಇವರ ಸಹಯೋಗದಲ್ಲಿ ದಿನಾಂಕ 23-07-2023 ರಂದು ಪೆರ್ಡೂರು ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ “ಆರೋಗ್ಯದ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ”ದ ಸಭಾ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವು ಪೂಜಾರಿ, ಉಪಾಧ್ಯಕ್ಷ ಚೇತನ ಶೆಟ್ಟಿ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಕೆ ತುಕಾರಾಮ್ ನಾಯಕ್, ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅರ್ಚನಾ, ಪದ್ಮ ಕಮಲ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಶ್ವೇತಾ, ಮಣಿಪಾಲ ಕೆ.ಎಂ.ಸಿ ಯ ಡಾ. ಸಂಜಯ್ ಕಿಣಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಡೂರು ವಲಯ ಮೇಲ್ವಿಚಾರಕರಾದ ಮನೋರಮ, ವಿಶ್ವ ಹಿಂದೂ ಪರಿಷದ್ ಗ್ರಾಮಾಂತರ ಸಹ ಕಾರ್ಯದರ್ಶಿ ಅಭಿಲಾಷ, ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಉಪಸ್ಥಿತರಿದ್ದರು.


ಗಾಳಿ ಮಳೆಗೆ  ಮರ ಬಿದ್ದು ಹಾನಿ – ಶಾಸಕರ ಭೇಟಿ, ಪರಿಶೀಲನೆ

ಭಾರಿ ಗಾಳಿ ಮಳೆಗೆ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣೈ ನಿವಾಸಿ ಜಯಲಕ್ಷ್ಮಿ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ ಉಂಟಾಗಿದ್ದು, ದಿನಾಂಕ 23-07-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.


ಕೆಸರಡೊಂಜಿ ದಿನ

ಯುವ ಬಾಂಧವರು, ಮಟ್ಟಾರು ಇವರ ನೇತೃತ್ವದಲ್ಲಿ ದಿನಾಂಕ 23-07-2023 ರಂದು ನಡೆದ ದ್ವಿತೀಯ ವರ್ಷದ “ಕೆಸರಡೊಂಜಿ ದಿನ” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.