ವಿವಿಧ ವಿಷಯಗಳ ಕುರಿತು ಸದನದ ಗಮನ ಸೆಳೆದ ಶಾಸಕರು

ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ, ಕಿಂಡಿ ಆಣೆಕಟ್ಟು ನಿರ್ಮಾಣ, ತಡೆಗೋಡೆ ನಿರ್ಮಾಣ, ಯಕ್ಷಗಾನ, ಕಂಬಳ, ದೈವರಾಧನೆ ಕುರಿತು ಸದನದ ಗಮನ ಸೆಳೆದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ

ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ ಶಿಕ್ಷಕರ ನೇಮಕಾತಿಯಾಗಿಲ್ಲ. ಸರಕಾರ ಇದರ ನೇಮಕಾತಿಗೆ ಅವಕಾಶ ನೀಡಬೇಕು. ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಶೂ ಸಾಕ್ಸ್ ಗಳನ್ನು ಜೊತೆಗೆ ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯ ನೀಡಬೇಕು. ಸರಕಾರಿ ಶಾಲಾ ಶಿಕ್ಷಕರಿಗೆ ನೀಡುವ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಯೋಜನೆಯನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸಬೇಕು.ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಅನುಸಾರವಾಗಿ ಶಿಕ್ಷಕರನ್ನು ಶೀಘ್ರವಾಗಿ ನೇಮಿಸಬೇಕು. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಾನ್ಯತೆ ಮತ್ತು ಮಾನ್ಯತೆಯ ನವೀಕರಣಕ್ಕೆ ಇರುವ ಮಾರ್ಗಸೂಚಿಗಳನ್ನು ಸಳಿಕರಿಸಿ ಅವರ ಮಾನ್ಯತೆ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು. ಅಗ್ನಿನಂದಕ ಹಾಗೂ ಕಟ್ಟಡ ಸುರಕ್ಷತೆ ನಿಯಮಗಳನ್ನು ಸರಳಿಕರಿಸಬೇಕು

ಪಶ್ಚಿಮ ಮುಖವಾಗಿ ಹರಿಯುವ ನೀರನ್ನು ಸಮುದ್ರಕ್ಕೆ ಬಿಡದೆ ಅವಶ್ಯಕತೆ ಇರುವ ಕಡೆ ಅಲ್ಲಲ್ಲಿ ಕಿಂಡಿ ಆಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿ ಮತ್ತು ಕೃಷಿಭೂಮಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆ ಅಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಬೇಕು.

ಕಡಲ ಕೊರೆತದ ತಡೆಗೋಡೆಗಳನ್ನು ಜೂನ್ ತಿಂಗಳ ಬದಲಾಗಿ ಜನವರಿ ತಿಂಗಳಿನಲ್ಲಿಯೇ ಕಡಲ ಕೊರೆತ ಉಂಟಾಗುವ ಪ್ರದೇಶಗಳ ಮಾಹಿತಿ ಪಡೆದು ವಿಸ್ತೃತವಾದ ಯೋಜನೆಯನ್ನು ತಯಾರಿಸಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು.

ಕರಾವಳಿಯ ಸಾಂಸ್ಕೃತಿಕ ಕಲೆಗಳಾದ ದೈವರಾದನೆ ಯಕ್ಷಗಾನ, ಕಂಬಳ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಾರಿಯ ಈ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ಇದರಿಂದ ಜಾನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಚಟುವಟಿಕೆಗಳಿಗೆ ಬೆಂಬಲವನ್ನು ನೀಡಬೇಕೆಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಸದಸನದ ಗಮನ ಸೆಳೆದರು.


Media Reports 17-07-2023