ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಶಾಸಕರ ಕಚೇರಿಯನ್ನು ಕಾಪು ಆಡಳಿತ ಸೌಧದಲ್ಲಿ ತೆರೆಯಲಾಗಿದೆ. ಸೋಮವಾರದಿಂದ ಕಚೇರಿ ಕಾರ್ಯಾರಂಭ ಮಾಡಿದೆ. ಸಾರ್ವಜನಿಕರು ಕಚೇರಿಯಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಕಚೇರಿ ಉದ್ಘಾಟನಾ ದಿನದಂದೇ ಜನಸ್ಪಂದನೆ!
ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಅಲೆವೂರಿನ ಸುಜಾತ ಮತ್ತು ತನುಜಾ ಹಾಗು ವಿಮಲಾ ದಿನೇಶ ಪೂಜಾರಿ ಅವರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರವನ್ನು ವಿತರಿಸಲಾಯಿತು. ಮೇ 5ರಂದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಗಾಳಿ ಮಳೆಯಿಂದಾಗಿ ಜೀವ ಹಾನಿ ಸಂಭವಿಸಿದ್ದು ಅದರಲ್ಲಿ ಕಳತ್ತೂರು ಗ್ರಾಮದ ಕೃಷ್ಣ ಮತ್ತು ಪಾದೂರು ಗ್ರಾಮದ ಪುಷ್ಪ ಅವರು ಮೃತಪಟ್ಟಿದ್ದರು. ಇಂದು ಅವರ ಕುಟುಂಬದವರಿಗೆ ಪರಿಹಾರ ಮಂಜೂರು ಆದೇಶವನ್ನು ಶಾಸಕರು ವಿತರಿಸಿದರು. ಈ ಪ್ರಕರಣದಲ್ಲಿ ಕೃಷ್ಣ ಮುಖಾರಿ ಅವರ ಪತ್ನಿ ಇಂದಿರಾ ಮತ್ತು ಪುಷ್ಪ ಅವರ ಪತಿ ರಘುನಾಥ ಕುಲಾಲ್ ಅವರಿಗೆ ತಲಾ 5 ಲಕ್ಷ ರೂ.ಪರಿಹಾರ ಮಂಜೂರಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಶಾಸಕರುಗಳಾದ ಶ್ರೀ ಲಾಲಾಜಿ ಮೆಂಡನ್ ಹಾಗೂ ಶ್ರೀ ರಘುಪತಿ ಭಟ್, ಗುಜ್ಜಾಡಿ ಪ್ರಭಾಕರ್ ನಾಯಕ್, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ನಾಯಕ್ ಪಕ್ಷದ ಪ್ರಮುಖರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.